Welcome to RTE-2019 Application Submission Process  
Last date for RTE Application Submission is 25/04/2019   
                                                    Total No.of Application recived as on 18/8/2019 01:28 PM - 18401
Click here to Recover RTE Application Number – 2019                                                  
RTE Helpline:Toll free:1800-425-34567,080-22484716

         ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಗಮನಿಸಬೇಕಾದ ಅಂಶಗಳು

·
ಅರ್ಜಿ ಸಲ್ಲಿಸುವಾಗ ನಿಖರವಾದ ಮಾಹಿತಿಯನ್ನು ನೀಡುವುದು. ತಪ್ಪು ಮಾಹಿತಿ ನೀಡಿರುವುದು ಕಂಡು ಬಂದಲ್ಲಿ ಅಂತಹ ಅರ್ಜಿಗಳನ್ನು ತೀರಸ್ಕರಿಸಲಾಗುವುದು.

·
ಆರ್.ಟಿ.ಇ- 2019ರ ಪ್ರಕ್ರಿಯೆಗೆ ಸಂಬಂಧಿಸಿದ ಶಾಲೆಗಳ ಲಭ್ಯತೆಯನ್ನು Know My Neighbourhood Schools  ನಲ್ಲಿ ಪಡೆಯಬಹುದಾಗಿದೆ.

·
ಅರ್ಜಿ ಸಲ್ಲಿಸುವ ಮೊದಲು ಇಲಾಖೆ ವೆಬ್ ಸೈಟ್ ನಲ್ಲಿ ನೀಡಿರುವ ಆರ್.ಟಿ.ಇ-2019 ರ ನೆರೆಹೊರೆಯ ಶಾಲೆಗಳ ಪಟ್ಟಿಯನ್ನು ವೀಕ್ಷಿಸುವುದು ಹಾಗೂ ತಮ್ಮ ನೆರೆಹೊರೆಯ ಶಾಲೆಗಳ ಲಭ್ಯತೆಯನ್ನು ಗಮನಿಸುವುದು. ಆರ್.ಟಿ.ಇ ತಿದ್ದುಪಡಿ ನಿಯಮದ ಪ್ರಕಾರ ತಮ್ಮ ನೆರೆಹೊರೆಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಇದ್ದಲ್ಲಿ ಅಂತಹ ನೆರೆಹೊರೆಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಆದರೆ ಅನುದಾನಿತ ಶಾಲೆಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

·
ತಮ್ಮ ನೆರೆಹೊರೆಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಲಭ್ಯವಿಲ್ಲದಿದ್ದಲ್ಲಿ ಮಾತ್ರ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
·
ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಮುಂದುವರೆಸುವ ಮೊದಲು ತಮ್ಮ ನೆರೆಹೊರೆಯಲ್ಲಿ ಶಾಲೆಗಳ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳುವುದು. ಶಾಲೆಗಳ ಲಭ್ಯತೆಯನ್ನು ಗಮನಿಸದೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಮುಂದುವರೆದಲ್ಲಿ ಮುಂದಿನ ಹಂತದಲ್ಲಿ ಅರ್ಜಿಯನ್ನು ಸಲ್ಲಿಸಲು ತಂತ್ರಾಂಶದಲ್ಲಿ ಅವಕಾಶ ಇರುವುದಿಲ್ಲ.

· ಅರ್ಜಿ ಸಲ್ಲಿಸಲು ವಯೋಮಿತಿ: ಮಗುವಿನ ಜನ್ಮ ದಿನಾಂಕದಿಂದ ದಿನಾಂಕ 01-06-2019 ರಲ್ಲಿ ಇದ್ದಂತೆ;

ಎಲ್.ಕೆ.ಜಿ ತರಗತಿಗೆ: 3 ವರ್ಷ 10 ತಿಂಗಳಿಂದ 4 ವರ್ಷ 10 ತಿಂಗಳು (01-08-2014 ರಿಂದ 01-08-2015 ರೊಳಗೆ ಜನಿಸಿದ ಮಕ್ಕಳು) 1ನೇ ತರಗತಿಗೆ: 5 ವರ್ಷ 10 ತಿಂಗಳಿಂದ 6 ವರ್ಷ 10 ತಿಂಗಳು (01-08-2012 ರಿಂದ 01-08-2013 ರೊಳಗೆ ಜನಿಸಿದ ಮಕ್ಕಳು)


  ಅರ್ಜಿ ಸಂಖ್ಯೆ ಮರುಪಡೆಯುವಿಕೆ: ಅರ್ಜಿ ಸಲ್ಲಿಸಿದ ನಂತರ, ಅರ್ಜಿ ಸಂಖ್ಯೆಯನ್ನು ಎಸ್.ಎಂ.ಎಸ್ ಮುಖಾಂತರ ಅರ್ಜಿಯಲ್ಲಿ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಗೆ ರವಾನಿಸಲಾಗುವುದು, ತದ ನಂತರ ಅರ್ಜಿಸಂಖ್ಯೆಯನ್ನು ಪಡೆಯಲು ತಂತ್ರಾಂಶದಲ್ಲಿ ಕೂಡ ಅವಕಾಶ ಕಲ್ಪಿಸಲಾಗಿದೆ. ಈ ಮೇಲೆ ತಿಳಿಸಿದ ವಿದಾನಗಳಿಂದ ಅರ್ಜಿ ಸಂಖ್ಯೆ ಪಡೆಯಲು ವಿಫಲವಾದಲ್ಲಿ, Click here to Recover RTE Application Number – 2019 ಲ್ಲಿ ಅರ್ಜಿ ಸಂಖ್ಯೆಯನ್ನು  ಮರುಪಡೆಯಬಹುದಾಗಿದೆ.

                                                  
                                                                                                                                                                   

 
Designed & Developed by Software Development Centre, e-Governance, Department Of Public Instuction Bengaluru